ಕ್ಯಾಲಿಫೋರ್ನಿಯಂ

ಯುರೇನಿಯಂ ಆಚೆಯ (ಟ್ರಾನ್ಸ್‍ಯುರೇನಿಕ್) ಧಾತುಗಳಲ್ಲಿ ಒಂದು. ಇದರ ರಾಸಾಯನಿಕ ಚಿಹ್ನೆ ಅಜಿ. ಆಕ್ಟಿನೈಡ್ ಶ್ರೇಣಿಯ ಧಾತುಗಳಲ್ಲಿ ಒಂಬತ್ತನೆಯದು. ಪರಮಾಣು ಸಂಖ್ಯೆ 98. ಇದರ ಸಂಭಾವ್ಯ ಎಲೆಕ್ಟ್ರಾನಿಕ್ ವಿನ್ಯಾಸ 1s2 2s2 2ಠಿ6 3s2 3ಠಿ6 3ಜ10 4s2 4ಠಿ6 4ಜ10 4ಜಿ14  5s2 5ಠಿ6 5ಜ10 5ಜಿ10  6s2 6ಠಿ6 7s2, ಇದನ್ನು 1950ರಲ್ಲಿ ಎಸ್. ಜಿ. ಥಾಂಪ್ಸನ್ ಮತ್ತು ಅವನ ಸಂಗಡಿಗರು ಸಂಶ್ಲೇಷಿಸಿದರು. ಅಮೆರಿಕದ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ 60" ವ್ಯಾಸದ ಸೈಕ್ಲೊಟ್ರಾನ್ ವೇಗೋತ್ಕರ್ಷದಲ್ಲಿ ಕ್ಯೂರಿಯಂ-242ನ್ನು ಹೀಲಿಯಂ ಆಯಾನುಗಳಿಂದ ತಾಡಿಸಿದಾಗ (ಬೊಂಬಾರ್ಡ್) ಕ್ಯಾಲಿಫೋರ್ನಿಯಮಿನ ಅಸ್ತಿತ್ವ ಬೆಳಕಿಗೆ ಬಂತು. ಮೂಡಿಬಂದ ಹೊಸ ಕೃತಕಧಾತುವಿಗೆ ಕ್ಯಾಲಿಫೋರ್ನಿಯಂ ಅನ್ವರ್ಥನಾಮವಾಯಿತು. ಇದರ ಪ್ರಧಾನ ಸಮಸ್ಥಾನಿಯ ಪರಮಾಣುತೂಕ 245. ಕ್ಯಾಲಿಫೋರ್ನಿಯಂ 242ರಿಂದ ಹಿಡಿದು ಕ್ಯಾಲಿಫೋರ್ನಿಯಂ-254ರ ವರೆಗಿನ ಸಮಸ್ಥಾನಿಗಳನ್ನು ಕಂಡುಹಿಡಿಯಲಾಗಿದೆ. ಎಲ್ಲ ಸಮಸ್ಥಾನಿಗಳಿಗೂ ವಿಕಿರಣಪಟುತ್ವ (ರೇಡಿಯೋ ಆಕ್ಟಿವಿಟಿ) ಉಂಟು. ಇವುಗಳ ಅರ್ಧಾಯು (ಹಾಫ್‍ಲೈಫ್) ಕೆಲವು ಮಿನಿಟುಗಳಿಂದ ಹಿಡಿದು ಸುಮಾರು 5,000 ವರ್ಷಗಳ ವರೆಗೂ ವ್ಯಾಪಿಸಿದೆ. ಭಿನ್ನ ಭಿನ್ನ ವರ್ಗಗಳ ಸಮಸ್ಥಾನಿಗಳನ್ನು ಪ್ರಯೋಗದ ಗುರಿ ವಸ್ತುವನ್ನಾಗಿ (ಟಾರ್ಗೆಟ್ ಮೆಟೀರಿಯಲ್) ಆರಿಸಿಕೊಂಡು ಅವನ್ನು ಬೇರೆ ಬೇರೆ ಕಣಗಳಿಂದ ತಾಡಿಸಿ ಕ್ಯಾಲಿಫೋರ್ನಿಯಮಿನ ವಿವಿಧ ಸಮಸ್ಥಾನಿಗಳನ್ನು ತಯಾರಿಸುವುದರ ಜೊತೆಗೆ ನ್ಯೂಕ್ಲಿಯರ್ ರಿಯಾಕ್ಟರುಗಳಲ್ಲೂ ಪ್ಲುಟೋನಿಯಂ-239ನ್ನು ನ್ಯೂಟ್ರಾನುಗಳ ಪ್ರಭಾವಕ್ಕೊಳಪಡಿಸಿ ಕ್ಯಾಲಿಫೋರ್ನಿಯಮಿನ ಸಮಸ್ಥಾನಿಗಳನ್ನು ತಯಾರಿಸಲಾಗುತ್ತದೆ. ಇಂಥವಲ್ಲಿ ಉತ್ಪಾದನೆಯಾಗುವ ಸಮಸ್ಥಾನಿಯ ಪರಿಮಾಣ ಹಲವು ಮಿಲಿಗ್ರಾಂಗಳಷ್ಟು ಮಾತ್ರ ! ಕ್ಯಾಲಿಫೋರ್ನಿಯಂ-252ನ್ನು ಪರಮಾಣು ಭೌತವಿಜ್ಞಾನದ ವಿವಿಧ ವಿಭಾಗಗಳಲ್ಲಿ ಬಳಸುವುದಲ್ಲದೆ ವೈದ್ಯಕೀಯ ಸಂಶೋಧನೆಯಲ್ಲೂ ಬಳಸುವುದಿದೆ. ಅಧಿಕ ತೀಕ್ಷ್ಣತೆಯ ನ್ಯೂಟ್ರಾನ್ ಆಕರಗಳ ಸಂಬಂಧದಲ್ಲಿ 252ಅಜಿರ ಉಪಯೋಗ ಹೆಚ್ಚು. ಅರ್ಧಾಯು 323 ವರ್ಷಗಳಿರುವ 249ಅಜಿ ಸಮಸ್ಥಾನಿಗೆ ರಾಸಾಯನಿಕ ಪರೀಕ್ಷೆಗಳಲ್ಲಿ ಅತ್ಯಧಿಕ ಪ್ರಯೋಜನ ಉಂಟು. ಇದನ್ನು ಅಜಿ(III)ರ ಕಾಂತಪ್ರವೃತ್ತಿಯನ್ನು (ಮ್ಯಾಗ್ನೆಟಿಕ್ ಸಸೆಪ್ಟಿಬಿಲಿಟಿ) ಅಳೆಯಲು ಉಪಯೋಗಿಸುತ್ತಾರೆ. ಕ್ಯಾಲಿಫೋರ್ನಿಯಮಿನ ನಾಲ್ಕು ಘನಸಂಯುಕ್ತ ವಸ್ತುಗಳನ್ನು (CfCl3, CfOCl, CfCOF ಮತ್ತು Cf2O3) ವರ್ಗೀಕರಿಸಲಾಗಿದೆ. ಇವೆಲ್ಲವನ್ನೂ ಶುಷ್ಕ ರಾಸಾಯನಿಕ ವಿಧಾಗಳಿಂದ ಕಂಡುಕೊಳ್ಳಲಾಗಿದೆ. ಎಲ್ಲ ಸಂಯುಕ್ತಗಳೂ ಹಸಿರು ಬಣ್ಣದವು. 1928ರ ಮೊದಲು 252ಅಜಿರ ರಾಸಾಯನಿಕ ಗುಣ ಲಕ್ಷಣಗಳನ್ನು ಟ್ರೇಸರ್ ವಿಧಾನವನ್ನು ಅನುಸರಿಸಿ ಅಧ್ಯಯನ ಮಾಡಲಾಗಿತ್ತು. ಆಕ್ಟಿನೈಡ್ ಶ್ರೇಣಿಯ ಇತರ ಧಾತುಗಳ ರಾಸಾಯನಿಕ ಗುಣಲಕ್ಷಣಗಳು ಇದಕ್ಕೂ ಇರುವುದು ಕಂಡು ಬಂದಿತು.           										*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ